A. O. Smith ಬಗ್ಗೆ
ಮಿಲ್ವೌಕೀ ವಿಸ್‌ನಲ್ಲಿನ ಪ್ರಮುಖ ಕಾರ್ಯಾಲಯವನ್ನು ಹೊಂದಿರುವ A. O. Smith ಕಾರ್ಪೊರೇಶನ್ ಜಗತ್ತಿನಾದ್ಯಂತ ತಯಾರಾಗುವ ಮತ್ತು ಮಾರಾಟವಾಗುವ ಉತ್ಪನ್ನಗಳಿಗೆ ನವೀನ ತಂತ್ರಜ್ಞಾನ ಮತ್ತು ಶಕ್ತಿ-ದಕ್ಷ ಪರಿಹಾರಗಳನ್ನು ಅನ್ವಯಿಸುವ ಮೂಲಕ ಜಾಗತಿಕ ನಾಯಕನಾಗಿದೆ.
ಕಂಪನಿಯು ಜಗತ್ತಿನ ಮುಂಚೂಣಿಯಲ್ಲಿರುವ ಮನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ನೀರು ಕಾಯಿಸುವ ಸಾಧನಗಳು ಮತ್ತು ಬಾಯ್ಲರ್‌ಗಳ ತಯಾರಕನಾಗಿರುವುದಲ್ಲದೇ ನೀರಿನ ಟ್ರೀಟ್ಮೆಂಟ್ ಮತ್ತು ಗಾಳಿಯ ಶುದ್ಧೀಕರಣ ಮಾಡುವ ಉತ್ಪನ್ನಗಳ ತಯಾರಕನೂ ಆಗಿದೆ.
ನಾವು ಕಾರ್ಯಾಚರಣೆಯಲ್ಲಿ ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ, ಚೀನಾ, ಭಾರತ, ಯುನೈಟೆಡ್ ಕಿಂಗ್‌ಡಮ್, ನೆದರ್‌ಲ್ಯಾಂಡ್ ಮತ್ತು ಟರ್ಕಿಯಲ್ಲಿ ಸುಮಾರು 12000 ಪುರುಷರು ಮತ್ತು ಮಹಿಳೆಯರನ್ನು ನೇಮಿಸಿಕೊಂಡಿದ್ದೇವೆ.